ಮುಖಪುಟ

ಸರ್ಕಾರಿ ಪಾಲಿಟೆಕ್ನಿಕ್, ಕಾರ್ಕಳಕ್ಕೆ ಸ್ವಾಗತ

ನಮ್ಮ ಪಾಲಿಟೆಕ್ನಿಕ್ ಕಾರ್ಕಳ, ಉಡುಪಿ ಜಿಲ್ಲೆಯಲ್ಲಿ ಸ್ಥಾಪಿತವಾಗಿರುವ ಸರ್ಕಾರಿ ಸಂಸ್ಥೆಯಾಗಿದ್ದು 2008-09ರಲ್ಲಿ ಸ್ಥಾಪನೆಯಾಗಿದೆ. ಸಂಸ್ಥೆಯು 7.30 ಎಕರೆಗಳ ವಿಶಾಲವಾದ ಕ್ಯಾಂಪಸ್ನಲ್ಲಿದೆ.

ನಮ್ಮ ಹೊಸ ಕಾಲೇಜು ಕಟ್ಟಡವು ಶ್ರೀ.ಆರ್.ವಿ.ದೇಶಪಾಂಡೆ ಅವರು 08-04-2015 ರಂದು ಉನ್ನತ ಶಿಕ್ಷಣ ಮಾಜಿ ಗೌರವಾನ್ವಿತ ಸಚಿವರು ಉದ್ಘಾಟಿಸಿದರು. ಪ್ರಸ್ತುತ, ಪಾಲಿಟೆಕ್ನಿಕ್ ಅನ್ನು ಸಂಪೂರ್ಣವಾಗಿ ಕರ್ನಾಟಕ ಸರ್ಕಾರವು ನಡೆಸುತ್ತದೆ ಮತ್ತು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ, ಕರ್ನಾಟಕ (DTE) ವ್ಯಾಪ್ತಿಯಲ್ಲಿ ಬರುತ್ತದೆ. ಇದು ಹೊಸದಾಗಿ ಆರಂಭಗೊಂಡ ಸಂಸ್ಥೆಯಾಗಿದ್ದು, ಅಸ್ತಿತ್ವದಲ್ಲಿರುವ ಪಾಲಿಟೆಕ್ನಿಕ್ ಸ್ಕೀಮ್, MHRD ಯ ಮಹಿಳಾ ವಸತಿಗೃಹಗಳಂತಹ ಉನ್ನತ ಮಟ್ಟದ ಯೋಜನೆಗಳನ್ನು ಸ್ವೀಕರಿಸುತ್ತದೆ.

2015-16ರ ಶೈಕ್ಷಣಿಕ ವರ್ಷದಲ್ಲಿ, ನಮ್ಮ ಸಂಸ್ಥೆಯನ್ನು ಮಹಿಳಾ ಪಾಲಿಟೆಕ್ನಿಕ್ನಿಂದ ಸಾಮಾನ್ಯ ಪಾಲಿಟೆಕ್ನಿಕ್ಗೆ ಪರಿವರ್ತಿಸಲಾಗಿದೆ.

ಸರ್ಕಾರಿ ಪಾಲಿಟೆಕ್ನಿಕ್, ಕಾರ್ಕಳ, ಉಡುಪಿ ಜಿಲ್ಲೆ ಸಂಸ್ಥೆಯು 2008-09ರಲ್ಲಿ ಆರಂಭಗೊಂಡ ಕರ್ನಾಟಕದ ಶ್ರೇಷ್ಠ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿದೆ. ಈ ಸಂಸ್ಥೆಯು ಹಚ್ಚಹಸಿರಿನ ಸುಂದರ ನಿಸರ್ಗದ ಮಡಿಲಿನಲ್ಲಿ 130217443' ಅಕ್ಷಾಂಶ ಮತ್ತು 740972237' ರೇಖಾಂಶವಿರುವ 7.30 ಎಕ್ರೆ ವಿಸ್ತೀರ್ಣದ ಭೂಪ್ರದೇಶದಲ್ಲಿ 3752 ಚ.ಮೀಟರಿನ ಸುಸಜ್ಜಿತ ಕಟ್ಟಡವನ್ನು ಹೊಂದಿರುತ್ತದೆ. ಸರ್ಕಾರಿ ಪಾಲಿಟೆಕ್ನಿಕ್, ಕಾರ್ಕಳವು “ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್” ಇದರ ಮಾನ್ಯತೆ ಪಡೆದಿರುವ ಸರ್ಕಾರಿ ಸಂಸ್ಥೆಯಾಗಿದ್ದು, ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಅಧೀನದಲ್ಲಿರುತ್ತದೆ. ಈ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮೂರು ವರ್ಷದ ಡಿಪ್ಲೋಮಾ ಪ್ರೋಗ್ರಾಂಅನ್ನು ಈ ಕೆಳಗಿನ ವಿಷಯಗಳಲ್ಲಿ ನೀಡುತ್ತಿದೆ.

    1. ಕಾಮಗಾರಿ ವಿಭಾಗ
    2. ಗಣಕಯಂತ್ರ ವಿಭಾಗ
    3. ವಿದ್ಯುನ್ಮಾನ ಮತ್ತು ಸಂವಹನ ವಿಭಾಗ
    4. ಯಾಂತ್ರಿಕ ವಿಭಾಗ

   ಸಮರ್ಪಣಾಭಾವದ ಅರ್ಹ ನುರಿತ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಮತ್ತು ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಸದಾ ಕಾರ್ಯನಿರತರಾಗಿರುತ್ತಾರೆ. ಸುಸಜ್ಜಿತ ಪ್ರಯೋಗಾಲಯಗಳು, ಕಾರ್ಯಾಗಾರಗಳು ಮತ್ತು ಸಂಪನ್ಮೂಲ ಕೇಂದ್ರಗಳನ್ನು ಈ ಸಂಸ್ಥೆ ಹೊಂದಿರುತ್ತದೆ. ಸಂಸ್ಥೆಯಲ್ಲಿ ಸ್ಥಳೀಯ ಸಮುದಾಯದ ಅವಶ್ಯಕತೆಗಳನ್ನು ಗುರುತಿಸಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಹಾಗೂ ಈ ಮೂಲಕ ಅವರನ್ನು ಕೈಗಾರಿಕಾ ತರಬೇತಿಗೆ ತೆರೆದಿಡುತ್ತಿದೆ ಮತ್ತು ಇದು ಸಂಸ್ಥೆ ಮತ್ತು ಕೈಗಾರಿಕಾ ನಡುವಣ ಸಂವಹನವನ್ನು ಸುಗಮಗೊಳಿಸುತ್ತಿದೆ.

   ಸಂಸ್ಥೆಯು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಸಿಬ್ಬಂದಿ ಮತ್ತು ವಿದ್ಯಾರ್ಥಿ ಸೌಲಭ್ಯಗಳು ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಗಳನ್ನು ಆಯೋಜಿಸುತ್ತದ್ದು, ಸ್ವ-ಉದ್ಯೋಗದ ಅವಕಾಶಗಳ ಬಗ್ಗೆ ಸಲಹೆಗಳನ್ನು ನೀಡುತ್ತಿದೆ.